Tuesday, February 23, 2016

ಹತಾಶೆ ಎಂಬ ಚಕ್ರ ಸುಳಿಯಲ್ಲಿ ಸಿಕ್ಕಾಗ ...


ಮನಸ್ಸು ತುಂಬ ಭಾರ ಆಗಿದೆ ಅಕ್ಕ ಅಂತ ಮಂಜು ಹೇಳಿದಾಗ ಅದರ ಆಳ ಗೊತ್ತಿದೆ ಅಂಸ್ತ್ತು. ಆತಂಕ, ಎದೆಭಾರ, ಕಳವಳ, ತುಡಿತ, ಕೊರಗು, ಯೋಚನೆ, ದುಗುಡ, ವ್ಯಾಕುಲತೆ - ಎಲ್ಲವೂ ಒಟ್ಟಿಗೆ ಸೇರಿ ತರುವ ಉಮ್ಮಳತೆ ಮನಸನ್ನ ಖಿನ್ನತೆಗೆ ತಳ್ಳುತ್ತದೆ. ಅದರ ನೋವು ಅನುಭಸುವನಿಗೆ ಮಾತ್ರ ಗೊತ್ತು. ಹೇಳ್ತಾರಲ್ಲ ನೀರಲ್ಲಿ ಇಳಿದವನಿಗೆ ಮಾತ್ರ ಅದರ ಆಳ ಗೊತ್ತು ಅಂತ ... ಇಧು ಹಾಗೆ.

ಏನನ್ನ ಮಾಡಿದರೆ ನನ್ನ ಸಮಸ್ಯೆಗೆ ಪರಿಹಾರ ಸಿಗತ್ತೆ!! ಕಷ್ಟಗಳು ಯಾವಾಗ ಪರಿಹಾರ ಆಗತ್ತೆ !!! ನನಗೇ ಆಗಬೇಕ ಇದು!!! ತೊಡಕುಗಳಿಗೆ ಕೊನೇನೆ ಇಲ್ವ!! ಇಷ್ಟು ದುಡಿದರೆ ನನ್ಗೆ ಸಾಕು. ಇಷ್ಟು ಸಂಪಾದನೆ ಆದರೆ ಸಾಕು, ಕೆಲಸ ಆಗಿ ಬಿಟ್ರೆ ತಿರುಪತಿ ತಿಮಪ್ಪನ ದರ್ಶನ ಮಾಡಿ ಬರ್ತಿನಿ. ಪರೀಕ್ಷೆ ನಲ್ಲಿ ಪಾಸಾದರೆ ಮುಡಿ ಕೊಡ್ತಿನಿ ಎಂದು ದೇವರಿಗೆ ನಾನಾ ರೀತಿಯ ಬೇಡಿಕೆಗಳು. ಇಲ್ಲಿಂದ ಪ್ರಾರಂಭವಾಗಿ ಮಧುವೆ ಹಾಗು ಭವಿಷ್ಯದ ಚಿಂತೆ, ಕುಡುಕ ಗಂಡನ, ಮನೆಯ ಜವಾಬ್ಧಾರಿ ಇಲ್ಲದೆ ಅಲೆಯುವ ಹತಾಶೆ ಯಷ್ಟೋ ಹೆಣ್ಣು ಮಕ್ಕಳ ಗೋಳು. ಇವೆಲ್ಲಾ ಕಂಡಾಗ ಹತಾಶೆ ಎಷ್ಟು ದೊಡ್ಡ ಪದ ಅನ್ಸುತ್ತೆ. ಪದದ ಜೊತೆ ಮಿಳಿತವಾಗಿರೋದು ಮನಸಿನ ಭಾವನೆ. ಭಾವನೆಗೆ ಸಾವಿರಾರು ಕಾರಣಗಳು.

ಸಮಯಕ್ಕೆ ಇಷ್ಟಾದರೆ ಸಾಕು ಎಂದು ಹಪಪಿಸುವ ಮನಸ್ಸು ಒಂದೆಡೆಯಾದರೆ, ಮನಸಿನ ತುಂಬ ತುಂಬಿರುವ ಆತಂಕ. ದುಗುಡ ದೇಹದಲ್ಲಿರುವ ಅರ್ಧ ತ್ರಾಣವನ್ನ ಕರಗಿಸಿರುತ್ತೆ. ಯಾವುಧೇ ಕೆಲಸದಲ್ಲಿ ಉತ್ಸಾಹವಿಲ್ಲ, ಮಾಡಿ ಮುಗಿಸಬೇಕು ಅನ್ನೋ ಶಕ್ತಿ ಇಲ್ಲಯಾಕೆ ಏನು ನಡಿತಿಲ್ಲ ಅನ್ನೋ ನೋವು, ಮುಂದೆ ಏನ್ ಮಾಡಬೇಕು ಅನ್ನೋ ಆತಂಕ, ಕೆಲಸ ಆದ್ರೆ ಸಾಕಪ್ಪ ಅನ್ನೋ ಚಿಕ್ಕ ಭಾವನೆ ಇಂದ ಹಿಡಿದು ಬದುಕು ಇಷ್ಟೇನಾ ಅನ್ನೋ ವರ್ಗು ಕರೆದೊಯ್ಯುವ ಹತಾಶೆ ಪ್ರತಿಯೊಬ್ಬರ ಅನುಭವದಲ್ಲಿರುತ್ತೆ. desperation ಒಮೊಮ್ಮೆ ಏನೇನೊ ಮಾಡಿಸಿ ಬಿಡುತ್ತೆ. ಕಳ್ತನದಿಂದ ಕೊಲೆಯವರೆಗೂ ಹತಾಶೆ ಕೆಲಸ ಮಾಡಿಸಿರುತ್ತೆ. ದುಶ್ಚಟಗಳಿಂದ ಆತ್ಮ ಹತ್ಯೆಯ ವರೆಗೂ ಕರೆದೊಯುತ್ತೆ. ಇದರ ಆಳ ಬಲ್ಲವನೇ ಬಲ್ಲ.

ಮನಸಿನ ಖಿನ್ನತೆ ಯಾವುದೇ ವಯ್ಸಿಗೆ ಸೀಮಿತವಲ್ಲ. ಚಿಕ್ಕ ಮಕ್ಕಳಿಗೂ ಖಿನ್ನತೆ ಉಂಟಾಗತ್ತೆ. ದೊಡ್ಡವರಿಗೂ ಹೇಳಿಕೊಳ್ಳಲು ಇಷ್ಟ ಪಡುವುದಿಲ್ಲ, ಮಕ್ಕಳಿಗೆ ಹೇಳಿಕೊಳ್ಳಲು ಅರ್ಥವಾಗುವುದಿಲ್ಲ. ಆದರೆ ಹಾವ ಭಾವಗಳಲ್ಲಿ, ನಡೆ ನುಡಿಗಳಲ್ಲಿ ಎದ್ಧು ಕಾಣುವ ಖಿನ್ನತೆ ಮನಸಿಗ್ಗೆ ಹತ್ತಿರವಿರುವ ವರೆಗೆ ಮಾತ್ರ ಅರ್ಥವಾಗುವ ಸ್ಥಿತಿ. ಹತಾಶೆಯ ಬಗ್ಗೆ ವಾಸ್ತವ ಇದಾದರೆ ಇದರಿಂದ ಹೊರ ಬರುವ ದಾರಿ.... ಕಷ್ಟ ಬಂದಾಗ ಸಮಯಕ್ಕೆ ಸಿಗದಿರುವ ವಸ್ತು 'ಸಾಹಾಯ'... ತುಂಬಾ ಸರಾಗವಾಗಿ ಸಿಗುವ ವಸ್ತು 'ಸಲಹೆ'. There is enough advice but none helps. ಇದು ಮನಸ್ಸಿನ  ಖಿನ್ನತೆಗು ಬದುಕಿನ ತಪತ್ರಯಗಳಿಗೂ ವಿಸ್ತರಿಸುವ ಸತ್ಯ.

ಜೀವನದಲ್ಲಿ ನಾನು   ಖಿನ್ನತೆಗೆ ಒಳಗಾಗಿದ್ದೇನೆ. ೨೦೦೦ದ ಇಸವಿಯಲ್ಲಿ peak recession ಪಿರಿಯಡ್... ಓದು ಮುಗಿಸಿದ ವರ್ಷ. ಕೆಲಸಕ್ಕಾಗಿ ಅಲೆದ ವರ್ಷ.ಈಗಲೆ ಬರಬೇಕ recession,  ಹಣೆಬರಹವೇ ಸರಿಯಿಲ್ಲ ಎಂದು ಎಷ್ಟೋ ಬಾರಿ ಅನಿಸಿದ್ದುಂಟು. ಸಮಯದಲ್ಲಿ ಬದುಕಿನ ಒಂದು ನಿಜ ಅರ್ಥವಾಗಿದ್ದು ... ಎಷ್ಟೇ ಬುದ್ಧಿಯಿದ್ದರು, ಎಷ್ಟೇ ಅಂಕಗಳು ಬಂದಿದ್ದರು, ಹತಾಶೆಎಂಬ ಭೂತಕ್ಕೆ ನಮ್ಮ ಆತ್ಮವಿಶ್ವಾಸವನ್ನ ನಿಮಿಷಗಳಲ್ಲಿ ಕೊಂದು ಹಾಕುವ ಸಾಮರ್ಥ್ಯವಿದೆಎಷ್ಟೇ ದೃಡ ನಿರ್ಧಾರ ಮಾಡಿದರೂಎಷ್ಟೇ ಪ್ರಚಂಡ ಬುದ್ಧಿಯಿದ್ದರುಎಷ್ಟೇ ಉತ್ಕಟ ಇಚ್ಛೆಯಿದ್ದರು, ಹತಾಶೆ ಬೆನ್ನು ಬಿಡದ ಬೇತಾಳ. ನೀವೇ ಅದನ್ನ ಹೊರ ದಬ್ಬುವ ತನಕ ಅದು ನಿಮನ್ನು ಬಿಟ್ಟು ಹೋಗದು.
ಸ್ಥಿತಿಯಲ್ಲಿ ಏನು ಹೇಳಿದರು ಮಾಡಲಿಕ್ಕೆ ಹೊರಟು ಬಿಡುತ್ತೇವೆ. ಇದು ನನ್ನ ಚಿಕ್ಕಪ್ಪನ ಸಾವು ನೆನಪು ತರುವ ವಿಷಯ ಕೂಡ. ಆರು ವರ್ಷಗಳ ಹಿಂದೆ ಒಂದು ಅಪಘಾತಕ್ಕೆ ಸಿಕ್ಕಿ ಆಸ್ಪತ್ರೆ ಸೇರೆದಾಗ, ಮನೆಯಲ್ಲಿ ಎಲ್ಲರಿಗು ಆಗಾಥ ತಂದ ವಿಷಯ. ಬಹಳ ಪ್ರಿಯರಾಗಿದ್ದ ಅವರ ಇಲ್ಲದಿರುವಿಕೆ ನನ್ಗೆ ಊಹಿಸಿಕೊಳ್ಳಲಿಕ್ಕೆ ಆಗದ ವಿಷಯವಾಗಿತ್ತು. ಹದಿನೆಂಟು ದಿನಗಳು ಆಸ್ಪತ್ರೆಯ ವಾಸ, ನನ್ನಲ್ಲಿ ಯಾವ ಮಟ್ಟಿಗೆ desperation ತಂದಿತ್ತು ಎಂದಿದ್ದರೆ ಏನು ಮಾಡಲಿಕ್ಕೂ ತಯಾರಾಗಿ ನಿಂತಿದ್ದೆ. ರಸ್ತೆಯ ಮೂಲೆಯಲ್ಲಿರುವ ಕಲ್ಲಿಗೆ ಪೂಜೆ ಮಾಡಲು ಸಿದ್ದಳಿದ್ದೆ. ಅದೇ Desperation. It can make you do anything .

ಅಸಾಹಯಕತೆ,ಆತಂಕ,ದುಗುಡ, ದುಃಖ -- ಎಲ್ಲವೂ ಸೇರಿ ನಮ್ಮ ಮನಸ್ಸಿಗೆ ಆಗುವ ಭಾವನೆಗಳ ಮಹಾಪೂರ, ಅದರ ಯಾತನೆ ಕೆಳಲೊಲ್ಲದು. ನಿಜ ಎಂದರೆ ಸಾಕಷ್ಟು desperate ಸಂದರ್ಭಗಳು ನಮ್ಮ ಶಕ್ತಿಗೆ ಮೀರಿದಂತಹವು. ಇಲ್ಲವಾದರೆ ಕೆಲಸ ಆಗುವಿಕೆಗು ತೊಡಕು ತಂದಿಡುವವು. ಆತ್ಮವಿಶ್ವಾಸ  ಕೊಲ್ಲುವಂತಹವು. ನಂಬಿಕೆ ಕಳೆದು ಕೊಳ್ಳುವಂತಹವು. ಭರವಸೆ ನಾಶ ಗೊಳಿಸುವಂತಹವು.
ನಮ್ಮೊಳ್ಳಗೆ ನಿರುಪಯುಕ್ತತೆ ಎಂಬ ಬೀಜಬಿತ್ತಿ ಅದೇ ಹೆಮ್ಮರವಾಗಿ ಬೆಳೆಯಲು ಬಿಟ್ಟಿರುತ್ತೇವೆ. ದಿನಗಳಲ್ಲಿ ಅದರ ಬಗ್ಗೆಯೇ ಚಿಂತೆ ಮಾಡಿರುತ್ತೇವೆ. ಕೂತಲ್ಲೇ ಕೂತಿರುತ್ತೇವೆ. ಸಿಕ್ಕಾಪಟ್ಟೆ ನಿದ್ದೆ ಮಾಡಿರುತ್ತೇವೆ. ಇದರ ಹೊರತು, ವಾಸ್ತವ ಹಾಗು ಉಪದ್ರವಕ್ಕೆ ಪರಿಹಾರ ವೆಂಬುದು ಮುಸುಕು ಹಾಕಿ ಮೂಲೆಯಲ್ಲಿ ಕುಳಿತಿರುತ್ತದೆ. ಕೂತಲ್ಲಿಂದ ನಮ್ಮನ್ನ ನಾವೇ ಬಡಿದೆಬ್ಬಿಸಿ ಅದನ್ನು ಎಚ್ಚರಿಸಿ, ನಮ್ಮ ಶಕ್ತಾನುಸಾರ ಸಂದರ್ಭಕ್ಕೆ ಏನು ಮಾಡಬೇಕು ಎಂಬುದು ಮಾತ್ರ ತಲೆ ತುಂಬಿಸಿದರೆ ಅದು ಬುದ್ದಿವಂತರ ಲಕ್ಷಣ.

ನನ್ನ ಅನುಭವಗಳಿಂದ ಇವತ್ತಿಗೂ ಜ್ಞಾಪಕವಿರುವ ವಿಷಯ - Differentiate between what depends on you and what not.

ಪ್ರಕೃತಿ, ಸಮಾಜಕ್ಕೆ, ಪರಮಾರ್ಥಕ್ಕೆ ಬಿಟ್ಟಿರೋದೇನು, ನನಗೇನು ಸಾಧ್ಯ. ಹಾಗು ಅಸಾಧ್ಯವಾದದ್ದೇನು! 
ಜಗತ್ತನ್ನ ಬದಲಾಯಿಸಲು ಹೊರಡುವ ಮುನ್ನ ಜಸ್ಟ್ ಕನ್ನಡಿ ಮುಂದೆ ನಿಂತು 'ನೀನು ಬದಲಾಯಿಸ್ಕೋ' - ಅಷ್ಟು ಸಾಕು. ನನ್ನ ತಾಪತ್ರಯಗಳು ನನ್ನವು, ಅದಕ್ಕೆ ನಾನೇ ಪರಿಹಾರ ಅಂತ ಹೇಳಿ ಮುಂದೆ ಹೆಜ್ಜೆ ಹಾಕಿ. ನಾನು ಮಾಡಿದ್ದು ಇದನ್ನೆ.  ಪುಟ್ಟ ಪುಟ್ಟ ಹೆಜ್ಜೆಗಳು ... ನಿರಂತರ ಹೆಜ್ಜೆಗಳು. 

No comments:

Post a Comment